ಕೆಳಗೂರಿನಲ್ಲಿ ?ಸ್ತ್ರೀಶಕ್ತಿ
Posted date: 27 Thu, Oct 2011 ? 10:14:50 AM

ಚಿತ್ರದ ನಾಯಕಿ ಸ್ತ್ರೀಶಕ್ತಿ ಸ್ವಯಂ ಉದ್ಯೋಗ ಸಂಘವನ್ನು ಆರಂಭಿಸಿರುತ್ತಾಳೆ. ನಂತರ ನಾಯಕಿಗೆ ಮದುವೆಯಾಗುತ್ತದೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳಿಗೆ ಸಂಘದ ಜವಾಬ್ದಾರಿ ಒಪ್ಪಿಸಿ ನಾಯಕಿ ಗಂಡನ ಮನೆಗೆ ಹೋಗುತ್ತಾಳೆ. ಸಂಘದ ಚಟುವಟಿಕೆಗಳು ಹೇಗೆ ನಡೆಯುತ್ತಿದೆ ಎಂದು ತಿಳಿಯಲು ನಾಯಕಿ ಸ್ವಲ್ಪ ದಿನಗಳ ನಂತರ ತವರಿಗೆ ಆಗಮಿಸುತ್ತಾಳೆ. ಈ ಸನ್ನಿವೇಶವನ್ನು ಕಿಚ್ಚ ಸುದೀಪ್ ಅರ್ಪಿಸುವ, ಈಶಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಸ್ತ್ರೀಶಕ್ತಿ ಚಿತ್ರಕ್ಕಾಗಿ ಕೆಳಗೂರು ಟೀ ಎಸ್ಟೇಟ್‌ನಲ್ಲಿ ನಿರ್ದೇಶಕ ಎಸ್.ವಿ.ಸುರೇಶ್ ಚಿತ್ರಿಸಿಕೊಂಡರು. ಸೋನು ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
 ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಅರುಣ್‌ಸಾಗರ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಹೊ.ನ.ಸತ್ಯ ಕಥೆ, ಸಂಭಾಷಣೆ ಬರೆದಿದ್ದಾರೆ. ಅಚ್ಯುತರಾವ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೀವ್, ಸೋನು, ಶರತ್ ಲೋಹಿತಾಶ್ವಾ, ಸುಂದರರಾಜ್, ಗೋಪಿನಾಥ್‌ಭಟ್, ತುಳಸಿಶಿವಮಣಿ ಮುಂತಾದವರಿದ್ದಾರೆ. ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed